ಈ ಬಾಳ ಹೂದೋಟದಲ್ಲಿ
ಬಾಡಿರುವ ಹೂವು ನನ್ನದು…
ಅರಳಿದ ಹೂವುಗಳೆಷ್ಟೇ ಇದ್ದರೂ
ನಾಳೆ ಅವು ನನ್ನವೇ
ಮಕ್ಕಳ ಅಭ್ಯುದಯಕ್ಕೆ
ಹೋರಾಡಿ ಮಕ್ಕಳಿಂದ ಸೋತ ಅಪ್ಪ,
ಪ್ರಿಯತಮೆಯ ಹಾದಿ ಕಾಯುತ್ತಿರುವ
ಪ್ರೇಮಿಯು ಬಾಡಿದ ಹೂವು
ಮಗನ ಹಾದಿ ಕಾಯುತ್ತಿರುವ ತಾಯಿಯು
ಬಾಡಿದ ಹೂವು
ಒಗರು ಘಮದ ನೆನಪುಗಳ ಚೆಲ್ಲುವ
ಬಾಡಿದ ಹೂವುಗಳೆಲ್ಲ ನನ್ನವು
Posted in ಅನಿಸಿಕೆ, ಕವಿಯಾಗಿಸಿದ್ದು, ಭಾವನೆ | 1 Comment »
Posted in ಅನಿಸಿಕೆ, ಪತ್ರ | Leave a Comment »
ನನ್ನಯ ಗೆಳೆಯ ಹಾಸ್ಯದ ಸರದಾರ
ತಿಳಿ ಹಾಸ್ಯ ಚುಟುಕುಗಳ ಹರಿಕಾರ
ಬಾನಂಗಳ ಕಾದ ಸುಮನಸ
ಹರಿಸುವರು ಸಂಪದದಿ ನವರಸ
ಮಾಡಿದರಿವರ ಸಹವಾಸ
ಅನ್ನುವರಿವರು ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳೇಕೆ ಸಖೀ
ಮತ್ತೊಮ್ಮೆ ಹೇಳುವರು
ತಡೆಯಲಾಗದೆ
ಚಿಣ್ಣರ ಸುಖವ ಕಂಡು
ಅಳಲಾಗದು ಸಖೀ…!!!
ಈ ಹಿರಿತನ ಏಕೆ ಬೇಕಿತ್ತು
ಸಾಕಿರುವರು ಮನೆಯಲಿ
ಕೋಗಿಲೆಯ ಮರಿಯ
ಗೊತ್ತಿಲ್ಲದೇ ಪಾಪ
ಅಳಿಯನೆಂಬ ಕಾಗೆ ಕಾಯುತಿದೆ
ಬರಲು ಮರಿ ಹೊರಗೆ
ಅಂದು ಅಂದರು
ನೀನಾರೋ ನಾನಾರೋ
ನಂತರದಲ್ಲಿ
ನಾನು ರವಾನಿಸೋ
ಪ್ರೀತಿಯ ಎಸ್ಸೆಮ್ಮೆಸ್ ಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ,
ನನಗೆಳ್ಳಷ್ಟೂ ಬೇಸರವಿಲ್ಲ;
ಈಗ ಅಂತಾರೆ
ನೀ ನನ್ನ ಜೀವ
ನನಗೂ ಗೊತ್ತು
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ
ಕಾಯುತ್ತಿರುವೆ,
ಎಂದನ್ನುವರೋ ಬಾ ಗೆಳೆಯ ನನ್ನೆದೆಯ ಅರಮನೆಗೆ
ನಿನಗಾಗಿ ತೆರೆದಿದೆ ಬಾಗಿಲು…
ನನ್ನ ಹಿರಿಯ ಗೆಳೆಯ ಆಸುಹೆಗ್ಡೆಯವರಿಗೆ ನಾನು ಬರೆದದ್ದು ಮತ್ತು ನನ್ನ ಪ್ರಥಮ ಕನ್ನಡ ಕವಿತೆ
ಇಲ್ಲಿ ಬಳಕೆಯಾಗಿರುವುದು “ಬೆಣ್ಣೆಮಸಾಲೆ ದೋಸೆ” ಲೋಹಿತರ “ಲೋಹಿತತ್ರಾಂಶ“
Posted in ಅನಿಸಿಕೆ, ಕವಿಯಾಗಿಸಿದ್ದು, ಭಾವನೆ | Leave a Comment »
ಅಲೆ ಅಲೆಯಾಗಿ ಹರಿಯುತ್ತಿವೆ
ಮನದಾಸೆಗಳು ಪದವಾಗಿ
ಹದವಾದ ಮಣ್ಣಲ್ಲಿ
ಹಸಿರು ಹುಟ್ಟುವಾ ತೆರದಿ
ಸೂತ್ರ ಹರಿದ ಬಾನಪಟ
ವಾಗಿದ್ದ ನನ್ನ ಬಾಳಿಂದು
ಮೃಘಧರನ ತೆಕ್ಕೆಯಲ್ಲಿ
ಮೆಲುವಾಗಿ ನಗುತಿದೆ
ಹನಿ ಹನಿ ಮಳೆಯಲ್ಲಿ
ಸುಖ ಸಂತೋಷಗಳ ಸಿಂಚನ
ಕಹಿಯಾದ ಬಾಳ ಪುಟಗಳಲ್ಲಿ
ಕಂಡೆ ನಿನ್ನ ಪ್ರೀತಿಯ ಹೊಸತನ
ಕಣ್ಣಂಚಿನಲಿ ಮಿಂಚುತಿತ್ತು
ದುಸ್ವಪ್ನಗಳ ಜೋಕಾಲಿ
ಇಂದೆನ್ನ ಮನದಲ್ಲಿ ಅರಳುತಿದೆ
ನಿನ್ನ ಪ್ರೀತಿಯ ರಂಗೋಲಿ
Posted in ಕವಿಯಾಗಿಸಿದ್ದು, ಭಾವನೆ | Leave a Comment »
ಪುಟಿದೇಳುತಿದೆ ಉತ್ಸಾಹ
ನಿನ್ನ ಕಂಡ ಬಳಿಕ
ಮನಹಕ್ಕಿ ಹಾರುತ್ತಿದೆ
ದಿಗಂತವ ಚುಂಬಿಸುವ ತವಕ
ನಿನ್ನನಿಂದು ಕಂಡೆ
ಒಂದು ಕ್ಷಣ ಮರೆತೆ ನನ್ನ ನಾ
ತೇಲಿಹೋದೆ ಆ ನಿನ್ನ
ಮುಗ್ದ ನಗುವಲ್ಲಿ ಸೋತು
ನೀ ಬರುತಿರೆ ಎದುರಲ್ಲಿ
ಸಂತಸದ ವೃಷ್ಟಿ
ನಕ್ಕರೊಮ್ಮೆ ಸಾಕು
ನನಗದು ಪುಷ್ಪವೃಷ್ಟಿ
ಇರುಳಾದರೆ ಸಾಕು
ಕಾಯುತ್ತವೆ ಕಣ್ಣುಗಳು
ಸ್ವಪ್ನ ಸುಂದರಿ ನಿನ್ನ
ದಾರಿಯ ಇದಿರು ನೋಡುತ್ತಾ
ಚುಮು ಚುಮು ಚಳಿಯ
ಮುಂಜಾವದಲ್ಲಿ ನಿನ್ನ
ಬೆಚ್ಚನುಸಿರಿನ ಬಿಸಿಯಪ್ಪುಗೆಯಲ್ಲಿ
ಮೈಮರೆಯುವಾಸೆ ಪ್ರಿಯೆ
ಮಳೆಯಾಗದಿರು ಗೆಳತಿ
ಬಂದು ಹೋಗುವ ಹಾಗೆ
ತಂಗಾಳಿಯಾಗಿರು ಇಲ್ಲಿ
ನನ್ನುಸಿರಿನಲ್ಲಿ ಬೆರೆತು.
Posted in ಅನಿಸಿಕೆ, ಕವಿಯಾಗಿಸಿದ್ದು, ಭಾವನೆ | 1 Comment »