ಈ ಬಾಳ ಹೂದೋಟದಲ್ಲಿ
ಬಾಡಿರುವ ಹೂವು ನನ್ನದು…
ಅರಳಿದ ಹೂವುಗಳೆಷ್ಟೇ ಇದ್ದರೂ
ನಾಳೆ ಅವು ನನ್ನವೇ
ಮಕ್ಕಳ ಅಭ್ಯುದಯಕ್ಕೆ
ಹೋರಾಡಿ ಮಕ್ಕಳಿಂದ ಸೋತ ಅಪ್ಪ,
ಪ್ರಿಯತಮೆಯ ಹಾದಿ ಕಾಯುತ್ತಿರುವ
ಪ್ರೇಮಿಯು ಬಾಡಿದ ಹೂವು
ಮಗನ ಹಾದಿ ಕಾಯುತ್ತಿರುವ ತಾಯಿಯು
ಬಾಡಿದ ಹೂವು
ಒಗರು ಘಮದ ನೆನಪುಗಳ ಚೆಲ್ಲುವ
ಬಾಡಿದ ಹೂವುಗಳೆಲ್ಲ ನನ್ನವು
ನನ್ನವು
January 6, 2010 by sankushetty
ಅರಳಿದ ಹೂವು ನೀನು ನಿನಗಾಗಿ
ಬಾಡಿದವರನಿಂದು ಮರೆತೆಯೇನು
ನೀನು ಕಂಪ ಬೀರಲೆಂದೇ
ತಮ್ಮ ಕಂಪ ವ್ಯಯಿಸಿದವರು
ನಿನ್ನ ನಗೆಯ ಕಾಣಲೆಂದೇ
ತಮ್ಮ ನಗೆಯ ಮರೆತವರು
ನಿನ್ನ ಕಂಪಿನಿಂದಲೇ ಸುತ್ತಲೂ ಇರುವ
ಬಾಡಿದ ಮನಗಳಿಗೆ ನೀಡು ತಂಪ ನೀನು