ಗೆಳೆಯರೆ
ಇಂಟರ್ನೆಟ್ ಪ್ರಪಂಚದಲ್ಲಿ ಹಲವಾರು ಹಾಸ್ಯ ಸನ್ನಿವೇಶಗಳು ಸಾಮಾನ್ಯ. ನಾನೂ ತಪ್ಪು ಮಾಡುತ್ತೇನೆ, ನನ್ನ ಗೆಳೆಯರೂ ಮಾಡುತ್ತಾರೆ. ಅಲ್ಲಲ್ಲಿ ಕಾಣಸಿಗುವೆ ಕೆಲವು ಹಾಸ್ಯವಲ್ಲದ ಹಾಸ್ಯಗಳನ್ನು ಅಲ್ಲಿಂದ ಕೆತ್ತಿ ಇಲ್ಲಿ ಮೆತ್ತುತ್ತೇನೆ.
ನೋಡಿ ಓದಿ ಆನಂದಿಸಿ
ಇಂತೀ ನಿಮ್ಮ ಪ್ರೀತಿಯ
ಸಂದೀಪ
ಫ಼ೆಸ್ಬುಕ್ಕಿನಲ್ಲಿ ಈಗಷ್ಟೆ ಓದಿದ ಒಂದು ಕಾಮೆಂಟು..“ಇದನ್ನು ಓದಿದರೆ ಕುವೆಂಪು ಅವರ ಮೂಕಜ್ಜಿಯ ಕನಸು ನೆನಪಿಗೆ ಬರುತ್ತೆ…ಮಲೆನಾಡಿನಲ್ಲಿ ಸುರಿಯುವ ಮಳೆಯಂತೆ”
ಆಶೋಕ್ ಇಂಚರದಲ್ಲಿ ದುಂಡಿರಾಜರನ್ನು ಉಲ್ಲೇಖಿಸುತ್ತಾ “ಕೆಲವರು ನಟಿಯರು ನಟನೆಯ ಮೂಲಕ,ಇನ್ನು ಕೆಲವರು ದೇಹ ಸಿರಿ ಪ್ರದರ್ಶಿಸಿ ಜನಪ್ರಿಯರಾಗುತ್ತಾರೆ. ಪೆಟ್ಟು ತಿಂದು ಸುದ್ದಿಯಾದವರು ಐಂದ್ರಿತಾ ರೇ”
ha ha ha
ನಗಬೇಕೋ? ಅಳಬೇಕೋ? ಗೊತ್ತಾಗುತ್ತಿಲ್ಲ :l
ಡುಂಡಿರಾಜರೆನ್ನುತ್ತಾರೆ: “..ಪೆಟ್ಟು ತಿಂದು ಪ್ರಸಿದ್ಧರಾದರು ಐಂದ್ರಿತಾ ರೇ”
ನನ್ನ ಪ್ರಶ್ನೆ: ಪೆಟ್ಟು ಕೊಟ್ಟು ಚಿತ್ರಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳೋದೇ ಮೇಷ್ಟ್ರೇ?