Feeds:
Posts
ಟಿಪ್ಪಣಿಗಳು

ನನ್ನವು

ಈ ಬಾಳ ಹೂದೋಟದಲ್ಲಿ
ಬಾಡಿರುವ ಹೂವು ನನ್ನದು…
ಅರಳಿದ ಹೂವುಗಳೆಷ್ಟೇ ಇದ್ದರೂ
ನಾಳೆ ಅವು ನನ್ನವೇ
ಮಕ್ಕಳ ಅಭ್ಯುದಯಕ್ಕೆ
ಹೋರಾಡಿ ಮಕ್ಕಳಿಂದ ಸೋತ ಅಪ್ಪ,
ಪ್ರಿಯತಮೆಯ ಹಾದಿ ಕಾಯುತ್ತಿರುವ
ಪ್ರೇಮಿಯು ಬಾಡಿದ ಹೂವು
ಮಗನ ಹಾದಿ ಕಾಯುತ್ತಿರುವ ತಾಯಿಯು
ಬಾಡಿದ ಹೂವು
ಒಗರು ಘಮದ ನೆನಪುಗಳ ಚೆಲ್ಲುವ
ಬಾಡಿದ ಹೂವುಗಳೆಲ್ಲ ನನ್ನವು

ಪ್ರಿಯ ಮಿತ್ರರೆ,

ತಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು

ಶುಭವಾಗಲಿ

ಇಂತೀ ನಿಮ್ಮ ಪ್ರೀತಿಯ

ಸಂದೀಪ

ಗೆಳೆಯನಿಗಾಗಿ

ನನ್ನಯ ಗೆಳೆಯ ಹಾಸ್ಯದ ಸರದಾರ
ತಿಳಿ ಹಾಸ್ಯ ಚುಟುಕುಗಳ ಹರಿಕಾರ
ಬಾನಂಗಳ ಕಾದ ಸುಮನಸ
ಹರಿಸುವರು ಸಂಪದದಿ ನವರಸ

ಮಾಡಿದರಿವರ ಸಹವಾಸ
ಅನ್ನುವರಿವರು ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳೇಕೆ ಸಖೀ

ಮತ್ತೊಮ್ಮೆ ಹೇಳುವರು
ತಡೆಯಲಾಗದೆ
ಚಿಣ್ಣರ ಸುಖವ ಕಂಡು
ಅಳಲಾಗದು ಸಖೀ…!!!
ಈ ಹಿರಿತನ ಏಕೆ ಬೇಕಿತ್ತು

ಸಾಕಿರುವರು ಮನೆಯಲಿ
ಕೋಗಿಲೆಯ ಮರಿಯ
ಗೊತ್ತಿಲ್ಲದೇ ಪಾಪ
ಅಳಿಯನೆಂಬ ಕಾಗೆ ಕಾಯುತಿದೆ
ಬರಲು ಮರಿ ಹೊರಗೆ

ಅಂದು ಅಂದರು
ನೀನಾರೋ ನಾನಾರೋ

ನಂತರದಲ್ಲಿ
ನಾನು ರವಾನಿಸೋ

ಪ್ರೀತಿಯ ಎಸ್ಸೆಮ್ಮೆಸ್ ಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ,

ನನಗೆಳ್ಳಷ್ಟೂ ಬೇಸರವಿಲ್ಲ;

ಈಗ ಅಂತಾರೆ
ನೀ ನನ್ನ ಜೀವ

ನನಗೂ ಗೊತ್ತು
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ

ಕಾಯುತ್ತಿರುವೆ,
ಎಂದನ್ನುವರೋ ಬಾ ಗೆಳೆಯ ನನ್ನೆದೆಯ ಅರಮನೆಗೆ
ನಿನಗಾಗಿ ತೆರೆದಿದೆ ಬಾಗಿಲು…

ನನ್ನ ಹಿರಿಯ ಗೆಳೆಯ ಆಸುಹೆಗ್ಡೆಯವರಿಗೆ ನಾನು ಬರೆದದ್ದು ಮತ್ತು ನನ್ನ ಪ್ರಥಮ ಕನ್ನಡ ಕವಿತೆ

ಇಲ್ಲಿ ಬಳಕೆಯಾಗಿರುವುದು “ಬೆಣ್ಣೆಮಸಾಲೆ ದೋಸೆ” ಲೋಹಿತರ “ಲೋಹಿತತ್ರಾಂಶ

ಮತ್ತಿಲ್ಲಿ ಬಳಸುವುದು ಲೋಹಿತತ್ರಾಂಶ

ಇನ್ನಷ್ಟು

ಬಾಳ ರಂಗವಲ್ಲಿ

ಅಲೆ ಅಲೆಯಾಗಿ ಹರಿಯುತ್ತಿವೆ
ಮನದಾಸೆಗಳು ಪದವಾಗಿ
ಹದವಾದ ಮಣ್ಣಲ್ಲಿ
ಹಸಿರು ಹುಟ್ಟುವಾ ತೆರದಿ

ಸೂತ್ರ ಹರಿದ ಬಾನಪಟ
ವಾಗಿದ್ದ ನನ್ನ ಬಾಳಿಂದು
ಮೃಘಧರನ ತೆಕ್ಕೆಯಲ್ಲಿ
ಮೆಲುವಾಗಿ ನಗುತಿದೆ

ಹನಿ ಹನಿ ಮಳೆಯಲ್ಲಿ
ಸುಖ ಸಂತೋಷಗಳ ಸಿಂಚನ
ಕಹಿಯಾದ ಬಾಳ ಪುಟಗಳಲ್ಲಿ
ಕಂಡೆ ನಿನ್ನ ಪ್ರೀತಿಯ ಹೊಸತನ

ಕಣ್ಣಂಚಿನಲಿ ಮಿಂಚುತಿತ್ತು
ದುಸ್ವಪ್ನಗಳ ಜೋಕಾಲಿ
ಇಂದೆನ್ನ ಮನದಲ್ಲಿ ಅರಳುತಿದೆ
ನಿನ್ನ ಪ್ರೀತಿಯ ರಂಗೋಲಿ

ಉಲ್ಲಾಸ

ಪುಟಿದೇಳುತಿದೆ ಉತ್ಸಾಹ
ನಿನ್ನ ಕಂಡ ಬಳಿಕ
ಮನಹಕ್ಕಿ ಹಾರುತ್ತಿದೆ
ದಿಗಂತವ ಚುಂಬಿಸುವ ತವಕ

ನಿನ್ನನಿಂದು ಕಂಡೆ
ಒಂದು ಕ್ಷಣ ಮರೆತೆ ನನ್ನ ನಾ
ತೇಲಿಹೋದೆ ಆ ನಿನ್ನ
ಮುಗ್ದ ನಗುವಲ್ಲಿ ಸೋತು

ನೀ ಬರುತಿರೆ ಎದುರಲ್ಲಿ
ಸಂತಸದ ವೃಷ್ಟಿ
ನಕ್ಕರೊಮ್ಮೆ ಸಾಕು
ನನಗದು ಪುಷ್ಪವೃಷ್ಟಿ

ಇರುಳಾದರೆ ಸಾಕು
ಕಾಯುತ್ತವೆ ಕಣ್ಣುಗಳು
ಸ್ವಪ್ನ ಸುಂದರಿ ನಿನ್ನ
ದಾರಿಯ ಇದಿರು ನೋಡುತ್ತಾ

ಚುಮು ಚುಮು ಚಳಿಯ
ಮುಂಜಾವದಲ್ಲಿ ನಿನ್ನ
ಬೆಚ್ಚನುಸಿರಿನ ಬಿಸಿಯಪ್ಪುಗೆಯಲ್ಲಿ
ಮೈಮರೆಯುವಾಸೆ ಪ್ರಿಯೆ

ಮಳೆಯಾಗದಿರು ಗೆಳತಿ
ಬಂದು ಹೋಗುವ ಹಾಗೆ
ತಂಗಾಳಿಯಾಗಿರು ಇಲ್ಲಿ
ನನ್ನುಸಿರಿನಲ್ಲಿ ಬೆರೆತು.

ನೆನಪು

ನೆನಪಿನಂಗಳದಲ್ಲಿ ನೆನಹುಗಳ ಕುಲುಕಾಟ,

ನೆಪಗಳಲ್ಲಲ್ಲಿ ಕಳೆದುಹೋದ ಗೆಳೆತನದ ಹುಡುಕಾಟ,

ಮತ್ತದೆ ನೋವು ಮತ್ತದೆ ಚಿಂತೆ,

ಬದುಕು ಭಾವಗಳ ಸಂತೆ

ಗೆಳತಿ

ನಸುನಗು ಗೆಳತಿ ನೋವ ಮರೆತು
ಹುಸಿಯಾದರೂ ಸರಿ
ಎದೆಯೊಳಗೆ ಮಡುಗಟ್ಟಿರುವ
ಜ್ವಾಲಾಮುಖಿಯ ಮುಚ್ಚಿ

ನೋವೆಂದೂ ನಿರಂತರವಲ್ಲ
ನಲಿವಿನ ತೆರದಿ
ಬದುಕೇ ಶಾಶ್ವತವಲ್ಲ ಇನ್ನು
ನೋವು ನಲಿವುಗಳೇನು ಗೆಳತಿ?

ನಸುನಗು ಗೆಳತಿ ನೋವ ಮರೆತು
ನೀನತ್ತರೆ ನಿನ್ನನಳಿಸಿದವರು
ನಗುವರು ನಿನ್ನ ನೋಡಿ
ನೀನಕ್ಕರೆ ಅವರಳುವರು

ಭಾವುಕತೆ ಒಳ್ಳೆಯದೇ ಗೆಳತಿ
ಅತಿಭಾವುಕತೆ ಹೇಡಿತನ
ಸೋಲದಿರು ಹಿತಶತ್ರುಗಳಿಂದ
ನಸುನಗು ಗೆಳತಿ ನೋವ ಮರೆತು

ಕಾಯುತ್ತಿವೆ ನಾಳೆಗಳು ನಿನಗಾಗಿ
ಬಾಳ ಹಾದಿಯಲಿ
ಸುಂದರ ಬದುಕ ಕಟ್ಟು ಗೆಳತಿ
ನಿನ್ನ ಪ್ರೀತಿಯ ಪದಗಳಲಿ